ಗುಡ್
ಪ್ರೈಡೇ ಕ್ರೈಸ್ತರಿಗೆ ಪವಿತ್ರವಾದ ದಿನ. ಕ್ರಿಸ್‍ಮಸ್ ಯೇಸು ಕ್ರಿಸ್ತನ ಜನನವನ್ನು ಸೂಚಿಸಿದರೆ ಗುಡ್
ಪ್ರೈಡೇ ಕ್ರಿಸ್ತನ ಬಲಿದಾನವನ್ನು ಸಂಕೇತಿಸುತ್ತದೆ. ಇದನ್ನು ಶುಭ ಶುಕ್ರವಾರ, ಪವಿತ್ರ ಶುಕ್ರವಾರ,
ದೊಡ್ಡ ಶುಕ್ರವಾರ ಎಂಬ ಹೆಸುಗಳಿಂದಲೂ ಕರೆಯಲಾಗುತ್ತದೆ.
ಮನುಕುಲದ ಒಳಿತಿಗಾಗಿ ಕ್ರಿಸ್ತನು ತಾನೇ ಶಿಲುಬೆಗೆ ಏರಿದನು. ತನ್ನನ್ನ ಶಿಲುಬೆ ಏರಿಸಿದವರನ್ನೂ ದೂಷಿಸದೆ ‘ಕ್ಷಮಿಸವರನೆಲೆ ತಂದೆ ತಾವೆಸಗಿದ ಅಪರಾಧ ಏನೆಂದರಿಯದವರನು’ ಎಂದು ಕರ್ತನನ್ನು ಕೋರಿದನು. ಶಾಂತಿಗೆ ತಾನೇ ಸ್ವತ: ರೂಪಕವಾಗಿ ನಿಂತನು. ಯೇಸು ಕ್ರಿಸ್ತ ಬಂಧನಕ್ಕೆ ಒಳಗಾಗುವ ಘಟನೆಯಿಂದ ಹಿಡಿದು ಶಿಲುಬೆಗೆ ಏರುವುರದರವರೆಗಿನ ಘಟನೆಗಳನ್ನು 14 ಭಾಗಗಳಾಗಿ ವಿಂಗಡಿಸಿ ಪ್ರತಿಯೊಂದು ಭಾಗವನ್ನೂ ಗುಡ್ ಪ್ರೈಡೇಯಲ್ಲಿ ಅವಲೋಕಿಸುತ್ತಾ ಸಾಗಲಾಗುತ್ತದೆ. ಕೆಲವು ಚರ್ಚುಗಳಲ್ಲಿ ಇದನ್ನು ರಂಗರೂಪದಲ್ಲಿ ಕೂಡ ಅಭಿನಯಿಸುವುದು ಉಂಟು. ಈ ದಿನವನ್ನು ಕ್ರೈಸ್ತರು ಉಪವಾಸದ ದಿನವಾಗಿ ಆಚರಿಸುತ್ತಾರೆ. ಮರುದಿನ ಹೋಲಿ ಸಾಟರ್ ಡೇ. ಕ್ರಿಸ್ತನು ಶಿಲುಬೆ ಏರಿದ ನಂತರ ಇಡೀ ಜಗತ್ತನ್ನು ಕತ್ತಲೆ ಆವರಿಸಿ ಕೊಳ್ಳುತ್ತದೆ. ಇದನ್ನು ವಿಷಾದ ಭಾವದಿಂದ ಆಚರಿಸುತ್ತಾರೆ. ಕೆಲವೆಡೆ ಇದನ್ನು ವ್ರತದಂತೆ, ಹರಕೆಯಂತೆ ಕೂಡ ಆಚರಿಸಲಾಗುತ್ತದೆ. ಮೂರನೇ ದಿನ ಈಸ್ಟರ್ ಸಂಡೇ ಈ ದಿನದಂದು ಕ್ರಿಸ್ತನು ಪುನರುತ್ಥಾನಗೊಂಡನು ಎನ್ನುವುದು ನಂಬಿಕೆ. ಎರಡು ದಿನಗಳ ಶೋಕದ ಆಚರಣೆ ಮುಗಿದು ಈ ದಿನದಂದು ಸಂಭ್ರಮದ ಆಚರಣೆಗಳು ನಡೆಯುತ್ತವೆ. ಇಡೀ ಗುಡ್ ಪ್ರೈಡೇಯ ಆಚರಣೆ ಕತ್ತಲಿನಿಂದ ಬೆಳಕಿನ ಕಡೆಗೆ ಸಾಗುವ ಉನ್ನತ ಆಶಯವನ್ನು ಹೊಂದಿದೆ.